ಜೀವಾತ್ಮಕ್ಕೆ ಬೇಕು ಆಧ್ಯಾತ್ಮ!
ಪ್ರಾಣಿಯಂತೆ ಮನುಷ್ಯನಾಗಿ ಹುಟ್ಟುವುದು ದುರ್ಲಭ. ಅದಕ್ಕಿಂತ ಪುರುಷತ್ವವಿರುವ ಜನ್ಮವೂ ಮತ್ತೂ ದುರ್ಲಭ. ಅದಕ್ಕಿಂತಲೂ ಸಾತ್ವಿಕ ಸ್ವಭಾವವಿರುವ ಹುಟ್ಟು ಇನ್ನೂ ವಿರಳ. ವಿಪ್ರತ್ವಕ್ಕಿಂತಲೂ ವೈದಿಕಮಾರ್ಗದಲ್ಲಿ ನಿಷ್ಠೆಯುಳ್ಳವನಾಗಿರುವುದು ಇನ್ನೂ ಅಪರೂಪ. ಅದಕ್ಕಿಂತಲೂ ಶೇಷ್ಠವಾದದ್ದು ವಿದ್ವತ್ತು. ಶಾಸ್ತ್ರಗಳಲ್ಲಿ ಅಡಗಿರುವ ಆಳವಾದ ಯಥಾರ್ಥಜ್ಞಾನವನ್ನು ಪಡೆಯುವುದು ಇನ್ನೂ ಕಷ್ಟ. ಆತ್ಮ ಮತ್ತು ಅನಾತ್ಮಗಳ ವಿವೇಕಜ್ಞಾನ, ಆಧ್ಯಾತ್ಮ ವಿದ್ಯೆಯಲ್ಲಿ ಗಾಢ ಅನುಭವ, ತನ್ನಲ್ಲಿರುವ ಆತ್ಮವೇ ಎಲ್ಲರಲ್ಲಿಯೂ ಇರುವುದೆಂಬ ಬ್ರಹ್ಮಭಾವದಲ್ಲಿರುವುದು ಕ್ರಮವಾಗಿ ಒಂದಕ್ಕಿಂತ ಇನ್ನೊಂದು ಶ್ರೇಷ್ಠವಾದದ್ದು. ಈ ಫಲವೂ ನೂರುಕೋಟಿ ಜನ್ಮಗಳಲ್ಲಿ ಸಂಪಾದಿಸಿದ ಪುಣ್ಯಗಳಿಂದಲ್ಲದೆ ಬೇರೆ ಯಾವುದರಿಂದಲೂ…