-
ಜೀವಾತ್ಮಕ್ಕೆ ಬೇಕು ಆಧ್ಯಾತ್ಮ!
ಪ್ರಾಣಿಯಂತೆ ಮನುಷ್ಯನಾಗಿ ಹುಟ್ಟುವುದು ದುರ್ಲಭ. ಅದಕ್ಕಿಂತ ಪುರುಷತ್ವವಿರುವ ಜನ್ಮವೂ ಮತ್ತೂ ದುರ್ಲಭ. ಅದಕ್ಕಿಂತಲೂ ಸಾತ್ವಿಕ ಸ್ವಭಾವವಿರುವ ಹುಟ್ಟು ಇನ್ನೂ ವಿರಳ. ವಿಪ್ರತ್ವಕ್ಕಿಂತಲೂ ವೈದಿಕಮಾರ್ಗದಲ್ಲಿ ನಿಷ್ಠೆಯುಳ್ಳವನಾಗಿರುವುದು ಇನ್ನೂ ಅಪರೂಪ. ಅದಕ್ಕಿಂತಲೂ ಶೇಷ್ಠವಾದದ್ದು ವಿದ್ವತ್ತು. ಶಾಸ್ತ್ರಗಳಲ್ಲಿ ಅಡಗಿರುವ ಆಳವಾದ ಯಥಾರ್ಥಜ್ಞಾನವನ್ನು ಪಡೆಯುವುದು ಇನ್ನೂ ಕಷ್ಟ. ಆತ್ಮ ಮತ್ತು ಅನಾತ್ಮಗಳ ವಿವೇಕಜ್ಞಾನ, ಆಧ್ಯಾತ್ಮ ವಿದ್ಯೆಯಲ್ಲಿ ಗಾಢ ಅನುಭವ, ತನ್ನಲ್ಲಿರುವ ಆತ್ಮವೇ ಎಲ್ಲರಲ್ಲಿಯೂ ಇರುವುದೆಂಬ ಬ್ರಹ್ಮಭಾವದಲ್ಲಿರುವುದು ಕ್ರಮವಾಗಿ ಒಂದಕ್ಕಿಂತ ಇನ್ನೊಂದು ಶ್ರೇಷ್ಠವಾದದ್ದು. ಈ ಫಲವೂ ನೂರುಕೋಟಿ ಜನ್ಮಗಳಲ್ಲಿ ಸಂಪಾದಿಸಿದ ಪುಣ್ಯಗಳಿಂದಲ್ಲದೆ ಬೇರೆ ಯಾವುದರಿಂದಲೂ…
-
ದೃಢಮನಸ್ಸು ಉಳ್ಳವರು, ಬ್ರಹ್ಮಜಿಜ್ಞಾಸೆಯ ಬಲಿಷ್ಠರು !
ಕೆಲ ಮತಾಂಧರು ಕೇವಲ ಹುಟ್ಟಿನಿಂದ ಬ್ರಾಹ್ಮಣರಾದವರಿಗೆ ಮಾತ್ರ ಆತ್ಮಜ್ಞಾನ ಲಭ್ಯವೆಂದು ಹೇಳುತ್ತಾರೆ. ಇಂತಹ ಅಪಾರ್ಥಗಳಿಂದಲೇ ಹಿಂದೂ ಧರ್ಮಕ್ಕೆ ಅಪಾರ ಅಪಚಾರಗೊಳ್ಳುತ್ತಿರುವುದು. ಜ್ಞಾನನಿಷ್ಠೆ, ಬ್ರಹ್ಮಭಾವ, ಮನಸ್ಸು, ಹೃದಯಗಳ ಶ್ರೀಮಂತಿಕೆ ಗುಣಗಳನ್ನು ಹೊಂದಿರುವ ಸರ್ವರೂ ವಿಪ್ರತರೆ. ತೃಪ್ತಿ, ಆತ್ಮಸಮರ್ಪಣಭಾವ ಮತ್ತು ಸಮೃಕ್ ಜ್ಞಾನದಿಂದ ಬರುವ ಸಮತೋಲನ ಸುಸಂಸ್ಕೃತ ಮನುಷ್ಯನ ಸಾತ್ತ್ವಿಕ ಕುರುಹುಗಳು. ಆಧ್ಯಾತ್ಮಿಕ ಪ್ರಗತಿಯ ದೃಷ್ಠಿಯಲ್ಲಿ ಮಾನವನ ಕುಲವನ್ನು ಮೂರು ಪಂಗಡಗಳಲ್ಲಿ ಕಾಣಬಹುದು. ಪ್ರಾಣಿ-ಮಾನವ, ಮನುಷ್ಯ-ಮಾನವ ಮತ್ತು ದೇವ-ಮಾನವ. ತನ್ನ ಪಾಕೃತಿಕ ಸ್ವಭಾವಗಳಿಗೆ ಅಡಿಯಾಳಾಗಿ ಭಾವಾವೇಶಗಳ ಗುಲಾಮನಂತೆ ವರ್ತಿಸುವವನು ಪ್ರಾಣಿ-ಮಾನವ….
-
ಭಕ್ತರ ಕಲ್ಪತರು ಶ್ರೀರಾಮಕೃಷ್ಣರು !
ಪಪರಮಾತ್ಮನ ಅಗಣಿತ ಕಲ್ಯಾಣಗುಣಗಳಲ್ಲಿ ಕರುಣೆಯೇ ಪ್ರಧಾನವಾದುದ್ದು. ಸಕಲ ಸದ್ಗುಣಗಳೂ ರತ್ನಸದೃಶವಾದವುಗಳೆಂಬುದು ನಿಜವಾದರೂ ಕರುಣೆಯ ಕುಂದಣವಿಲ್ಲದೆ ಅವು ಶೋಭಿಸಲಾರವು. ಪಂಡಿತ-ಪಾಮರ, ಬಡವ-ಬಲ್ಲಿದ, ಪುಣ್ಯಾತ್ಮನ-ಪಾಪಾತ್ಮವೆಂಬ ಯಾವ ಭೇಧವೂ ಇಲ್ಲದೆ ಸರ್ವರಿಗೂ ಸಮಾನವಾಗಿ ಜೀವನಾಧಾರವಾದ ಗಾಳಿ ನೀರು ಬೆಳಕುಗಳು ದೊರೆಯುತ್ತಿರುವುದರ ಹಿನ್ನಲೆಯಲ್ಲಿ ಪರಮಾತ್ಮನ ಕರುಣೆಯನ್ನೇ ಕಾಣಬಹುದು. ಭಗವಂತನು ಮಾನವ ರೂಪ ಧರಿಸಿ, ಮಾನವರ ನಡುವೆಯೇ ಓಡಾಡುತ್ತ ಮಾನವಮಂಗಲವನ್ನು ಸಾಧಿಸುವ ಅವನ ಕಾರ್ಯ ಪ್ರಣಾಳಿಯಲ್ಲೂ ಗೋಚರವಾಗುವುದು ಅದೇ ಕರುಣೆಯೇ. ಶ್ರೀರಾಮಕೃಷ್ಣರ ದೈವತ್ವವೆಂಬುದು ಮಾನವತ್ವದ ಪರದೆಯನ್ನು ಹರಿದು ಕಾಣಿಸಿಕೊಂಡಾಗ ನೆರೆದಿದ್ದ ಭಕ್ತರೆಲ್ಲ ಕಂಡು ಅನುಭವಿಸಿದ್ದು…